Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಭರ್ಜರಿ ನೇಮಕಾತಿ

Blog-post Thumbnail

ಪರಿಷತ್‌ : ಗೃಹ ಇಲಾಖೆ ಅಡಿ ಬರುವ ಪೊಲೀಸ್‌ ಮತ್ತು ಕಾರಾಗೃಹ ಸೇರಿದಂತೆ ವಿವಿಧ ಇಲಾಖೆಯಲ್ಲಿ 31,694 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದರು. ಪ್ರಶ್ನೋತ್ತರ ವೇಳೆ ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2008-2013ರ ಅವಧಿಯಲ್ಲಿ ಯಾವುದೇ ಹುದ್ದೆಗಳು ಭರ್ತಿ ಆಗದ ಕಾರಣ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿದ್ದವು. ಹೀಗಾಗಿ ಕಳೆದ ಐದು ವರ್ಷಗಳಲ್ಲಿ 26,188 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗ ಹೊಸದಾಗಿ 12,139 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದರು. ಪೊಲೀಸ್‌ ಇಲಾಖೆಯಲ್ಲಿ 1,12,975 ಹುದ್ದೆಗಳು ಮಂಜೂರಾಗಿದ್ದು, 26,105 ಹುದ್ದೆಗಳು ಖಾಲಿ ಇದೆ, ಕಾರಾಗೃಹ ಇಲಾಖೆಯಲ್ಲಿ